ನಿತ್ಯಾನಂದ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ
ರಾಮನಗರ: ಬಿಡದಿ ಬಳಿಯ ಧ್ಯಾನಪೀಠದಲ್ಲಿ ನಿತ್ಯಾನಂದ ಇ¨ªಾನೆ ಎಂಬ ಸುಳಿವು ಕೊರೆಯುತ್ತಿದ್ದಂತೆ ಕನ್ನಡ ಪರ ಸಂಘಟನೆಗಳು ನಿತ್ಯಾನಂದನ ಗಡಿಪಾರಿಗೆ ಆಗ್ರಹಿಸಿ ಮತ್ತೆ ಪ್ರತಿಭಟನೆ ನಡೆಸಿ¨ªಾರೆ. ಬುಧವಾರ ಕರ್ನಾಟಕ ಜನಪರ ವೇದಿಕೆಯ ರಾಜಾÂಧ್ಯಕ್ಷ ರಮೇಶ್ ಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಧ್ಯಾನಪೀಠದ ಮುಂಭಾಗ ಧರಣಿ ಕುಳಿತು ನಿತ್ಯಾನಂದನ ಗಡಿಪಾರಿಗೆ ಆಗಹಿಸಿದರುÅ. ಆರತಿರಾವ್ ಮತ್ತು ರಂಜಿತ ಪ್ರಕರಣದ ನಂತರ ಈತನಿಂದಾಗಿ ರಾಜ್ಯಕ್ಕೆ ಕಳಂಕ ಬಂದಿದೆ. ಈತನನ್ನು ರಾಜ್ಯದಿಂದಲೇ ಹೊರದಬ್ಬುವಂತೆ ಅವರು ಸರ್ಕಾರವನ್ನು ಆಗ್ರಹಿಸಿ¨ªಾರೆ. ಮುಚ್ಚಳಿಕೆ ಧಿಕ್ಕರಿಸಿದ್ದಾನೆ, ಆಕ್ರೋಶ: ಕೆಲವು ತಿಂಗಳುಗಳ ಹಿಂದೆ ನಿತ್ಯಾನಂದ ಧ್ಯಾನಪೀಠದಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾನೆ. ಆದರೂ ನಿನ್ನೆ ತಮಿಳುನಾಡಿನಿಂದ ಭಕ್ತರನ್ನು ಕರೆಸಿಕೊಂಡು ಧೀಕ್ಷೆ ಕೊಡುವ ಕಾರ್ಯಕ್ರಮ ನಡೆಸಿ¨ªಾನೆ. ತಮಿಳುನಾಡಿನಲ್ಲಿ ನಡೆಯಬೇಕಾದ ಈ ಕಾರ್ಯಕ್ರಮಕ್ಕೆ ಅಲ್ಲಿನ ಪೊಲೀಸರು ಅವಕಾಶ ನೀಡಿಲ್ಲ. ಹೀಗಾಗಿ ಆ ಭಕ್ತರನ್ನು ಬಿಡದಿಯ ಧ್ಯಾನಪೀಠಕ್ಕೆ ಕರೆಸಿಕೊಂಡಿರುವ ನಿತ್ಯಾನಂದ ಜಿÇÉಾಧಿಕಾರಿಗಳಿಗೆ ಬರದುಕೊಟ್ಟಿರುವ ಮುಚ್ಚಳಿಕೆಯನ್ನು ಧಿಕ್ಕರಿಸಿ¨ªಾನೆ ಎಂದು ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿ¨ªಾರೆ. 2013ರ ಫೆಬ್ರವರಿ 1ರೊಳಗೆ ನಿತ್ಯಾನಂದ ರಾಜ್ಯವನ್ನು ತೊರೆಯಬೇಕು, ಜಿÇÉಾಡಳಿತವಾದರು ಆತನನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದಲ್ಲಿ ಸಂಘಟನೆಯ ವತಿಯಿಂದ ಧ್ಯಾನಪೀಠಕ್ಕೆ ಮುತ್ತಿಗೆ ಹಾಕಿ ನಿತ್ಯಾನಂದನ್ನು ರಾಜ್ಯದಿಂದ ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ. ಆಗ ಆಗುವ ಎÇÉಾ ಅನಾಹುತಗಳಿಗೂ ಜಿÇÉಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರಣವಾಗಲಿದೆ ಎಂದು ಅವರು ಎಚ್ಚರಿಸಿ¨ªಾರೆ. ಇದೇ ದಿನ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಕೂಡ ನಿತ್ಯಾನಂದನ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ¨ªಾರೆ.
http://kannada.yahoo.com/%E0%B2%A8-%E0%B2%A4-%E0%B2%AF-%E0%B2%A8-%E0%B2%A6-%E0%B2%97%E0%B2%A1-%E0%B2%AA-%E0%B2%B0-085658358.html
No comments:
Post a Comment